Friday, March 21, 2008

ಸರ್ಕಾರದಿಂದ ಉನ್ನತ ಶಿಕ್ಷಣದ ಅವನತಿ


ಎಂ.ಎಸ್ .ತಿಮ್ಮಪ್ಪ
ವಿಶ್ರಾಂತ ಕುಲಪತಿ
ಬೆಂಗಳೂರು ವಿಶ್ವ ವಿದ್ಯಾಲಯ .

ಈಗ ಕೆಲವು ವರ್ಷಗಳಿಂದ ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣವನ್ನು ಅವನತಿಯ ಹಾದಿಯತ್ತ ಕೊಂಡೊಯ್ಯುತ್ತಿದೆ .ಸರ್ಕಾರ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಹಿಸಲೆಂದೇ ೨೦೦೦ ದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಖಾಯಿದೆ ತಂದರು .ಅದರ ಪ್ರಕಾರ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಗೆ ಚುನಾವಣೆಯನ್ನು ತಪ್ಪಿಸಿ ಸರ್ಕಾರವೇ "ಶ್ರೇಷ್ಠ ಶಿಕ್ಷಣ ತಜ್ಞ "ರನ್ನು ನಾಮ ನಿರ್ದೈಏಶಿಸಲು ತೀರ್ಮಾನಿಸಿತು. ಆದರೆ ೨೦೦೪-೨೦೦೫ ರಲ್ಲಿ ಧರ್ಮ ಸಿಂಗ್ ಮುಖ್ಯ ಮಂತ್ರಿ ಹಾಗು ಡಿ.ಮಂಜುನಾಥ್ ಉನ್ನತ ಶಿಕ್ಷಣ ಮಂತ್ರಿ ಆದಾಗ ಶಿಕ್ಷಣ ತಜ್ಞರೂ ಅಲ್ಲದ, ಆಳುವ ರಾಜಕೀಯ ಪಕ್ಷದ ಪದಾಧಿಕಾರಿಗಳನ್ನು ಕಳುಹಿಸಿತು . ತೀವ್ರ ವಿರೋಧ ವ್ಯಕ್ತವಾಯಿತು . ಹೈಕೋರ್ಟ್ ವಿರೋಧ ಸಮ್ಮತಿಸಿತು. ಸರ್ಕಾರ ಪಟ್ಟಿಯನ್ನು ವಾಪಾಸು ಪಡೆಯುವ ಔದಾರ್ಯ ತೋರಿತು .ಆದರೆ ಮುಂದಿನ ಮುಖ್ಯ ಮಂತ್ರಿ ಕುಮಾರಸ್ವಾಮಿ, ಉನ್ನತ ಶಿಕ್ಷಣ ಮಂತ್ರಿ
ಶಂಕರಮೂರ್ತಿ ಸರ್ಕಾರ ಶಿಕ್ಷಣ ಶ್ರೇಷ್ಠರು ಹಾಗಿರಲಿ ಶಿಕ್ಷಣಕ್ಕೆ ಸಂಬಂಧ ಪಟ್ಟಿರದವರನ್ನು ಕಳುಹಿಸಿ ಕೊಟ್ಟಿತು .

ವಿಶ್ವ ವಿದ್ಯಾಲಯಗಳ ಕುಲಾಧಿಪತಿಗಳು ,ರಾಜ್ಯದ ರಾಜ್ಯಪಾಲರು ,ಉನ್ನತ ಶಿಕ್ಷಣ ಅವನತಿಯ ಹಾದಿ ಹಿಡಿಯಲು ತಮ್ಮಕೊಡಿಗೆಯನ್ನೂ ಸಲ್ಲಿಸಿದ್ದಾರೆ .ಹಿಂದಿನ ರಾಜ್ಯಪಾಲರದ ಚತುರ್ವೇದಿ ಅವರು ನಿವೃತ್ತ ಸರ್ಕಾರಿ ಐಎ ಎಸ್ ಅಧಿಕಾರಿಗಳನ್ನು ಕುಲಪತಿ ಆಯ್ಕೆಶೋಧನಾ ಸಮಿತಿಗೆ ಸೇರಿಸಿದರು .ಅಷ್ಟೆ ಅಲ್ಲ ,ಅವರನ್ನು ಸಮಿತಿಯ ಅಧ್ಯಕ್ಷ ರನ್ನಾಗಿಯೂ ಮಾಡಿದರು .ನಿವೃತ್ತ ಮುಖ್ಯ ಕಾರ್ಯದರ್ಷಿ ಶಂಕರನರಾಯಣನ್ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಶೂಧನ ಸಮಿತಿ ಅಧ್ಯಕ್ಷರಾಗಿದ್ದರು .ಈಗಿನ ರಾಜ್ಯಪಾಲ ರಾಮೇಶ್ವರ ಥಾಕೂರ್ ಅವರೂ ಇದನ್ನು ಮುಂದುವರಿಸಿದರು .ಚಿರಂಜೀವಿಸಿಂಗ್ ಹಂಪಿ ವಿಶ್ವ ವಿದ್ಯಾಲಯ ಕುಲಪತಿ ಶೂಧನ ಸಮಿತಿ ಥೆರೆಸ ಭಟ್ತಚಾರ್ಯ ಅವರನ್ನು ಮಹಿಳಾ ವಿಶ್ವ ವಿದ್ಯಾಲಯ ಕುಲಪತಿ ಷೋ ಧನ ಸಮಿತಿ ಅಧ್ಯಕ್ಷರು ಗಳನ್ನಾಗಿ ಮಾಡಿದರು .ಈ ರಾಜ್ಯಪಾಲರು ಇನ್ನೂ ಒಂದು ಹೆಜ್ಜೆ ಮುಂದಿಟ್ಟರು .ಮೈಸೂರು ವಿಶ್ವ ವಿದ್ಯಾಲಯಕ್ಕೆ ಶೋಧನಾ ಸಮಿತಿ ಶಿಫಾರಸು ಮಾಡಿದ ಮೂರರಲ್ಲಿ ವೊಬ್ಬರನ್ನು ಆಯ್ಕೆಮಾಡುವ ಬದಲು ಮೂವರನ್ನೂ ಸಂಧರ್ಶನ ಮಾಡಿ ಮೂವರನ್ನೂ ತಿರಸ್ಕರಿಸಿದರು . ಇದೊಂದು ಎಲ್ಲೂ ಕಂಡರಿಯದ ಸಂಗತಿ .ಮೂವರನ್ನು ಶಿಪಾರಸು ಮಾಡಿದ ಶೂಧನ ಸಮಿತಿ ಸದಸ್ಯರಾದವರು ಹೆಸರಾಂತ ಶಿಕ್ಷಣ ತಜ್ಞರು :ಡಾ .ಚಂದ್ರಶೇಕರ ಶೆಟ್ಟಿ ,ರಾಜೀವ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿ ,ಇದರ ಅಧ್ಯಕ್ಷರು, ಡಾ .ಗೋಒವರ್ಧನ ಮೆಹ್ತಾ ,ಭಾರತೀಯ ವಿಜ್ಞಾನ ಸಂಸ್ಥೆಯ ಹಿಂದಿನ ನಿರ್ದೇಶಕರು ,ಡಾ ಎ .ಎಂ .ಪತ್ಹಾನ್ ,ಕುಲಪತಿ ,ಮೌಲಾನ ಅಜ್ಯಾದ್ ರಾಷ್ಟ್ರೀಯ ಮುಕ್ತ ಕೇಂದ್ರೀಯ ವಿಶ್ವ ವಿದ್ಯಾಲಯ ಮತ್ತು ಡಾ .ಬಿ .ಎಸ್ .ಶರ್ಮ, ಕೋಟ ಮುಕ್ತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ .ಇವರುಗಳು ಕುಲಪತಿ ಸ್ಥಾನಕ್ಕೆ ಆಯ್ದ ಮೂವರೂ ಹಿರಿಯ ಪ್ರಾದ್ಯಾಪಕರೆ : ಡಾ .ಚಂದ್ರ ಶೇಖರ್ ,ಇತಿಹಾಸ ಪ್ರಾದ್ಯಾಪಕ ,ಬೆಂಗಳೂರು ವಿಶ್ವ ವಿದ್ಯಾಲಯ , ಡಾ .ಅಬ್ದುಲ್ ರಹಮಾನ್ ,ಜೀವ ತಂತ್ರ ಜ್ಞಾನ ಪ್ರಾದ್ಯಾಪಕರು ,ಕುವೆಂಪು ವಿಶ್ವ ವಿದ್ಯಾಲಯ ಮತ್ತು ಡಾ .ರಂಗಪ್ಪ ,ರಸಾಯನ ಶಾಸ್ತ್ರ ಪ್ರಾದ್ಯಾಪಕರು ,ಮೈಸೂರು ವಿಶ್ವ ವಿದ್ಯಾಲಯ . ಖಾಯಿದೆ ಹೇಳುವ ಸಾಮಾಜಿಕ ನ್ಯಾಯವೂ ಈ ಹೆಸರುಗಳು ಪ್ರತಿಬಿಮ್ಹಿಸುತ್ತದೆ .ಈ ಮೂವರಲ್ಲಿ ಯಾರಾದರೂ ವೊಬ್ಬರನ್ನು ಕುಲಾಧಿಪತಿಗಳು ಆಯ್ಕೆ ಮಾಡ ಬಹುದಿತ್ತು .ಸಂಧರ್ಶಿಸಿ ,ಯಾವುದೇ ಕಾರಣ ಕೊಡದೆ ಮೂವರನ್ನೂ ತಿರಸ್ಕರಿಸಿರುವುದು ರಾಜ್ಯಪಾಲರ ನಿರಂಕುಶ ಪ್ರಭುತ್ವದ ಚಲಾವಣೆ .

ಸರ್ಕಾರದ ಇಂತಹ ಅತಂತ್ರ ಕ್ರಮ ಗಳಿಂದ ಹಲವಾರು ವಿಶ್ವ ವಿದ್ಯಾಲಯಗಳಲ್ಲಿ ತಿನ್ಗಲಾನು ಗಟ್ಟಲೆ ಖಾಯಂ ಕುಲಪತಿ ಇಲ್ಲ ದಂತಾಗಿದೆ .ಬೆನ್ಗಲೂರು ವಿಶ್ವ ವಿದ್ಯಾಲಯ,ಬಿಜಾಪುರ ಮಹಿಳಾ ವಿಶ್ವ ವಿದ್ಯಾಲಯ ದಲ್ಲಿ ಕುಲಪತಿ ಇಲ್ಲದೆ ಮೂರುವರೆ ತಿಂಗಳ ಮೇಲಾಗಿತ್ತು .ಈಗ ಕಳೆದ ಐದು ತಿಂಗಳಿಂದ ಮೈಸೂರು ವಿಶ್ವ ವಿದ್ಯಾಲಯ ದಲ್ಲಿ ಕುಲಪತಿ ಇಲ್ಲ .ಕುಲಪತಿ ಸ್ಥಾನ ಖಾಲಿ ಆಗುವದು ನಾಲ್ಕು ವರ್ಷ ಮುಂಚಯೆ ತಿಳಿದಿರುತ್ತೆ .ಆದರೂ ಈ ದುರ್ವ್ಯವಸ್ಥೆ ! ಕುಲಪತಿ ಸ್ಥಾನಕ್ಕೆ ತಜ್ನರ ಸಮಿತಿ ಶಿಪಾರಸು ಮಾಡಿದವರನ್ನು ಸಂಧರ್ಶಿಸಿ ಯಾರೊಬ್ಬರನ್ನೂ ಆಯ್ಕೆ ಮಾಡದೆ ತಿರಸ್ಕರಿಸುವುದು ಎಂದೆಂದೂ ನಡೆದಿಲ್ಲ . ಇದು ನಮ್ಮ ದೇಶದ ಸಾರ್ವ ಜನಿಕ ಆಡಳಿತ ದಲ್ಲಿ ಅರ್ಹತೆ ಇಲ್ಲದ ಅಧಿಕಾರ ಚಲಾವಣೆ ಗೆ ಒಂದು ಶ್ರೇಷ್ಟ ನಿಧರ್ಶನ .

ಸರ್ಕಾರದ ಇಂತಹ ದುರ್ನಧತೆ ಗೆ ಶಿಕ್ಷಣ ರಂಗ ಪ್ರತಿ ಭಟ್ಹಿಸಿ ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಹಾನಿ ಆಗುವದನ್ನು ತಡೆಯ ಬೇಕಾಗಿದೆ . ಶಿಕ್ಷಣ ರಂಗ ದಲ್ಲಿರುವವರು ಈ ಅನಿಷ್ಟ ಗಳಿಗೆ ಪಾಲು ದಾರ ರಾಗಿರುವವರನ್ನೂ ಬಯಲಿಗೆ ತರ ಬೇಕಾಗಿದೆ .











2 comments:

SBTVD said...

Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the SBTVD, I hope you enjoy. The address is http://sbtvd.blogspot.com. A hug.http://sbtvd.blogspot.com/

Thimmappa’s said...

Thanks for appreciating. I will visit yours.